ಸಂತಸ
ಸೂರ್ಯೋದಯದ ಎಳೆಬಿಸಿಲು ನೀ
ಬಿಸಿಲಲಿ ಬೀಸುವ ತಂಗಾಳಿ ನೀ
ಸಾಗರದ ಅಲೆಗಳ ನರ್ತನ ನೀ
ಹರಿವ ನದಿಯ ನಿನಾದ ನೀ
ಮುದನೀಡುವ ಸೂರ್ಯಾಸ್ತವು ನೀ
ಮನಕೆ ತಂಪೆರೆವ ಬೆಳದಿಂಗಳು ನೀ
ಮೊದಲ ಮಳೆಯ ಕಂಪು ನೀ
ಹಕ್ಕಿಗಳಿಂಚರದ ಇಂಪು ನೀ
ಪಾರಿಜಾತದ ಸುಗಂಧ ನೀ
ಮಗುವಿನ ಮುಗ್ಧ ನಗುವು ನೀ
ವಸಂತದ ಚಿಗುರಿನ ಚೆಲುವು ನೀ
ಮಳೆಹನಿಗಳ ನಿನಾದ ನೀ
ಇನ್ನೂ ಹೇಗೆ ಬಣ್ಣಿಸಲಿ ಹೇಳು ನಾ?
ನನ್ನೆದೆಯ ಸಂತಸದ ಹೊನಲು ನೀ.
Comments
Post a Comment