ಸಂಧ್ಯಾರಾಗ
(Image courtesy: Pinterest)
ಬಾ ಗೆಳೆಯ...ಕೈಪಿಡಿದು
ತೊರೆಯ ತೀರಕೆ
ನಮಗೆಂದೇ ಕೆಲಕ್ಷಣಗಳ
ಮುಡಿಪಾಗಿಸುವುದಕೆ
ಹರಿಯುವ ನೀರಲಿ
ಕಾಲಿಳಿಬಿಟ್ಟು
ಜಾರುವ ನೇಸರನಲಿ
ನೋಟವಿಟ್ಟು
ಸಂಜೆ ಓಕುಳಿಯಲ್ಲಿ
ಮುಳುಗೇಳುತ
ಪಿಸುಮಾತಿನ ಬಿಸಿಯುಸಿರಲಿ
ನಸುನಾಚುತ
ಕೈಬೆರಳುಗಳ ಬೆಸೆದು
ಸವಿಗನಸುಗಳ ಹೆಣೆದು
ಒಲವಿನ ದೋಣಿಯಲಿ
ಇಂದು ವಿಹರಿಸುವಾ
ಮಿಡಿವ ಸಂಧ್ಯಾರಾಗದಲಿ
ಹೃದಯಗಳ ಭಾವ
ವಿನಿಮಯದಲಿ
ನಾವಿಂದು ಮೂಕಪ್ರೇಕ್ಷಕರಾಗುವಾ
Comments
Post a Comment