ಏನಾಗಲೀ?
ನಿನ್ನ ಮುಂಗುರುಳ
ಸೋಕುವ ತಂಗಾಳಿಯಾಗಲೇ
ನಿನ್ನ ಮೊಗವ ಸ್ಪರ್ಶಿಸುವ
ಮಳೆ ಹನಿಯಾಗಲೇ
ನಿನ್ನ ಕಂಗಳ ತಣಿಸುವ
ಹೂವಾಗಲೇ
ನಿನ್ನ ಮನವ ಮುದಿಸುವ
ಕವಿತೆಯಾಗಲೇ
ನಿನ್ನ ಕಿವಿಗೆ ಸಂತಸವೀವ
ಹಾಡಾಗಲೇ
ನಿನ್ನ ಘ್ರಾಣ ಆಹ್ಲಾದಿಸುವ
ಪರಿಮಳವಾಗಲೇ
ನೀನೊದಬಯಸುವ
ಪುಸ್ತಕ ನಾನಾಗಲೇ
ನೀನಿಷ್ಟ ಪಡುವ
ಸಂಧ್ಯಾಕಾಲದ ಬಾನ ಕೆಂಪಾಗಲೆ
ಹೇಳು ಗೆಳೆಯ...ಹೇಗೆ ನಿನ್ನೆದೆಯ
ನಗುವಿಗೆ ಕಾರಣ ನಾನಾಗಲಿ?
Comments
Post a Comment