ನೀನು



ಮನದ ತುಮುಲವೇನಿದ್ದರೂ

ನಿನ್ನ ಮಾತುಗಳು ಸಾಕು

ಮನವ ತಣ್ಣಗಾಗಿಸಲು


ದುಗುಡವೆನಿದ್ದರೂ

ನಿನ್ನ ನಗುಮುಖವೇ ಸಾಕು

ತುಟಿಮೇಲೆ ನಗು ಸುಳಿಯಲು


ಏಕಾಂತದಲ್ಲಿ ನೊಂದಾಗ

ನೀನು ಕಂಡರೆ ಸಾಕು

ನನ್ನ ತನು-ಮನವರಳಲು


ನನಗಾಗಿ ನಿನ್ನ ಇರುವಿಕೆಯ 

ಅನುಭೂತಿಯೇ ಸಾಕು ನಾನು

ನೆಮ್ಮದಿಯಲಿ ದಿನದೂಡಲು


Comments