ಮೊಬೈಲ್ ಎಂಬ ಮಾಯೆ
ಮೊಬೈಲ್ ಎಂಬ ಜಾಲಕ್ಕೆ
ಸಿಲುಕುವುದಕ್ಕೂ ಮೊದಲು
ಬಾಲ್ಯಕ್ಕೆನೋ ಕಳೆಯಿತ್ತು.
ಲಗೋರಿ,ಬುಗುರಿ,ಚೆಂಡು
ಖೋಖೋ, ಚಿನ್ನಿದಾಂಡು
ಜೀಕುತ್ತಿದ್ದೆವು ಜೋಕಾಲಿ
ಆಣೆಕಲ್ಲು ಕೈಯಲ್ಲಿ
ಐಸ್ಪೈ, ರೀಚಗಳೂ
ಮುಟ್ಟಾಟ,ಕುಂಟೆಬಿಲ್ಲೆಯೂ.
ಮಳೆ ಬಂದಾಗ ನೀರಲ್ಲಿ ತೇಲುತ್ತಿದ್ದ
ಕಾಗದದ ದೋಣಿಗಳು ಈಗ ಮರುಗುತ್ತಿವೆ.
ಸಿಗಬಾರದೇ ಒಂದಿಷ್ಟು ಕೈಗಳು ತಮ್ಮನ್ನು
ನೀರಲಿ ಹರಿಬಿಡಲೆಂದು ಕಾತರಿಸುತ್ತಿವೆ.
ಮೊಬೈಲ್,ಟೀವಿಗಳ ಸೆಳೆತದಲಿ
ಆ ಚಂದದಾಟಗಳು ಮುದುಡಿದವಲ್ಲ.
ನವಯುಗದ ಈ ಪೀಳಿಗೆ
ಆ ಮೋಜು ಕಳೆದುಕೊಂಡಿತಲ್ಲ.
Comments
Post a Comment