ಮೊದಲ ಭೇಟಿ


Image courtesy: Pinterest


ಅವನದೇ ಯೋಚನೆಗಳ

ಬಲೆಯ ಮನದಲಿ ಹೆಣೆಯುತ

ದಾರಿಯಲ್ಲಿ ಸಾಗುತ್ತಿದ್ದೆ.

ದಾರಿ ಎರಡೂ ಬದಿಯಲಿ

ಬಣ್ಣಬಣ್ಣದ ಹೂ ಗಿಡಗಳು

ದಾರಿಯಲ್ಲಿ ಉದುರಿಬಿದ್ದ 

ಗುಲ್ಮೋಹರ್ ಹೂಗಳ ಹಾಸು.

ಬೀಸುತಿರುವ ತಂಗಾಳಿ

ಎದುರಿಗೆ ಇದ್ದಕ್ಕಿದ್ದಂಗೆ

ಯಾರೋ ಬಂದಂತಾಗಿ

ತಲೆ ಎತ್ತಿ ನೋಡಿದಾಗ ಅವನೇ !!!


ಮೊದಲ ಸರ್ತಿ ಅವನನ್ನ

ಸಾಕ್ಷಾತ್ ನೋಡಿ ಎದೆಯ ತಾಳ ತಪ್ಪಿತ್ತು.

ಕಣ್ಣುಗಳಲ್ಲಿ ಅವಕರಿವಿಲ್ಲದಂತೆ

ಹೊಳಪು ಹೆಚ್ಚಾಗಿತ್ತು.

ಎದೆಯ ಸಂತಸ ತುಟಿ

ಬಿರಿದು ಹೇಳುತ್ತಿತ್ತು.

ಅವನ ಕಣ್ಣುಗಳೂ ನಗುತ್ತಿದ್ದವು,

ತುಂಟನಗೆಯೊಂದು ತುಟಿಯಮೇಲೆ.

ಮಾತುಗಳೇ ಹೊರಡುತ್ತಿಲ್ಲ ನನಗೆ.

ಹಾಯ್ ಎನ್ನುತ್ತ ಅವನು ಕೈ ಕುಲುಕಿದಾಗ

ತಂಗಾಳಿಯಲ್ಲೂ ಬೆವೆತಂತೆ ಅನುಭವ.

ಕೊನೆಗೂ ಕೇಳಿದೆ "ಏನಿಲ್ಲಿ?"

ಅವನು ಏನೋ ಉಸುರಿದ.


ಅದ್ಯಾಕೆ ಅವನ ಧ್ವನಿ ಅಲಾರ್ಮ್ ಸದ್ದಿನಂತೆ ಕೇಳುತ್ತಿದೆ?!

ಅರೇ.....ಅದು ಅಲಾರ್ಮ್ ಸದ್ದೇ.

ಹೀಗಿತ್ತು ನಮ್ಮಿಬ್ಬರ ಮೊದಲ ಭೇಟಿ....‌.........‌‌ಕನಸಿನಲಿ!!




Comments